https://www.blogger.com/onboardinghttps://www.blogger.com/u/3/blog/posts/1062309631549652538?pli=1
COVID-19 ವೈರಸ್ ಸೋಂಕು ಹರಡುತ್ತಿರುವ ಈ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕಾ ಪ್ರಕ್ರಿಯೆಯಲ್ಲಿ ಸದಾ ತೊಡಗುವಂತೆ ಶಿಕ್ಷಕರ ಸಲಹೆಗಳು:-

ಸೇತುಬಂಧ ಸಾಮರ್ಥ್ಯಗಳು
6ನೇ ತರಗತಿ
1. ಸನ್ನಿವೇಶ ಮತ್ತು ಘಟನೆಗಳನ್ನು ಕುರಿತು ನಿರರ್ಗಳವಾಗಿ ಮಾತನಾಡುವರು.
2. ಪದಪುಂಜ ನುಡಿಗಟ್ಟು &ನಾಣ್ಣುಡಿಗಳನ್ನು ಓದಿ ಅರ್ಥ ಮಾಡಿಕೊಳ್ಳುವರು.
3. ಪಾಠದಲ್ಲಿ ಬರುವ ವಿಚಾರಗಳನ್ನು ಕಥೆ ಸಂಭಾಷಣೆ ಸಾರಾಂಶ ರೂಪದಲ್ಲಿ ಬರೆಯುವುದು.
4. ಓದಿದ ವಿಷಯಗಳ ಬಗ್ಗೆ ಆಲೋಚಿಸಿ ತಾರ್ಕಿಕವಾಗಿ ತೀರ್ಮಾನಿಸುವುದು.
5. ವಿಷಯವನ್ನು ಆಲಿಸಿದ ಬಳಿಕ ಏಕೆ?ಹೇಗೆ? ಹಾಗಾಗದಿದ್ದರೆ ಪ್ರಶ್ನೆಗಳಿಗೆ ಉತ್ತರಿಸುವರು.
6. ತತ್ಸಮ ತತ್ಭವಗಳನ್ನು ಬರೆಯುವರು.
7. ವಿಭಕ್ತಿ ಪ್ರತ್ಯಯಗಳನ್ನು ಗುರುತಿಸುವರು.
8. ಕತೃ ಕರ್ಮ ಕ್ರಿಯಾಪದಗಳನ್ನು ಗುರುತಿಸುವರು.
9. ಸಂಧಿಗಳನ್ನು ಗುರುತಿಸಿ ಹೆಸರಿಸುವರು.
10. ನೀಡಿರುವ ಹೇಳಿಕೆಗಳನ್ನು ಓದಿ ಒಗಟನ್ನು ಬಿಡಿಸುವರು.
ಪ್ರಶ್ನೆ ಪತ್ರಿಕೆ
1.ರಾಜೇಂದ್ರ ಪ್ರಸಾದರು ತಾವು ಯಾರ ಸೇವಕರೆಂದು ಹೇಳಿಕೊಳ್ಳುತ್ತಿದ್ದರು?
2. ಜಾಕೀರ್ ಹುಸೇನರು ವಿದ್ಯಾರ್ಥಿಗಳಿಗೆ ಬುದ್ದಿ ಕಲಿಸಲು ಯಾವ ವೇಷ ಹಾಕಿದರು?
3. ಕಾಲಿಗೆ ಬುದ್ಧಿ ಹೇಳು ಈ ನುಡಿಗಟ್ಟಿನ ಅರ್ಥ ಬರೆಯಿರಿ.
4. ಕರುಳು ಕಿತ್ತು ಬರುವಂತೆ ಅಳು ಈ ನುಡಿಗಟ್ಟಿನ ಅರ್ಥ ಬರೆಯಿರಿ.
5. ಗುಬ್ಬಚ್ಚಿಗಳು ಏನನ್ನು ಸಂಗ್ರಹಿಸುತ್ತಿದ್ದವು?
6.ಗುಬ್ಬಚ್ಚಿಯು ಮನೆಯ ಅಂಗಳಕ್ಕೆ ಶೋಭೆ ಹೇಗೆ ತರುತ್ತಿತ್ತು?
7. ನಾವು ಮೊದಲು ಯಾವ ಭಾಷೆಯನ್ನು ಕಲಿಯಬೇಕು?
8. ಯಾವ ಚಾಳಿಯನ್ನು ದೂರವಿಡಿ ಎಂದು ಅಮೃತ ಸೋಮೇಶ್ವರರು ಹೇಳುತ್ತಾರೆ.?
9.ರಾಣಿ ಚೆನ್ನಮ್ಮ ಹಲ್ಲು ಕಡಿದದ್ದು ಏಕೆ?
10.ಮರುಜನ್ಮ ನೀಡೆಂದು ಚೆನ್ನಮ್ಮ ಯಾರಲ್ಲಿ ಯಾಕೆ ಕೇಳಿದಳು?
11. ಕಾರ್ಯ ಈ ಪದದ ತದ್ಭವ ರೂಪ ಬರೆಯಿರಿ
12.ವಿಜ್ಞಾನ ಈ ಪದದ ತದ್ಭವ ರೂಪ ಬರೆಯಿರಿ.
13.ಗೌರಿಯು ಶಾಲೆಗೆ ಹೋದಳು ಈ ವಾಕ್ಯದಲ್ಲಿ ಶಾಲೆಗೆ ಈ ಪದದ ವಿಭಕ್ತಿ ಪ್ರತ್ಯಯ ಗುರುತಿಸಿ.
14.ಅಜ್ಜನು ಊರಿನಿಂದ ಬಂದ ಈ ವಾಕ್ಯದಲ್ಲಿ ಊರಿನಿಂದ ಈ ಪದದ ವಿಭಕ್ತಿ ಪ್ರತ್ಯಯ ಗುರುತಿಸಿ.
15.ರೈತನು ಹೊಲದಲ್ಲಿ ದುಡಿಯುವನು. ಈ ವಾಕ್ಯದಲ್ಲಿ ಕತೃ ಪದ ಗುರುತಿಸಿ
16.ರಾಧೆ ವೇಗವಾಗಿ ಓಡುತ್ತಿದ್ದಾಳೆ.ಈ ವಾಕ್ಯದಲ್ಲಿ ಕರ್ಮ ಪದ ಗುರುತಿಸಿ.
17. ಏಕೈಕ ಸಂಧಿ ಹೆಸರಿಸಿ.
18. ಸೂರ್ಯೋದಯ ಸಂಧಿ ಹೆಸರಿಸಿ.
19.ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ ಈ ಒಗಟನ್ನು ಬಿಡಿಸಿರಿ.
20. ಕೆರೆಯಲ್ಲ ಕುರಿಹೆಜ್ಜೆ. ಈ ಒಗಟನ್ನು ಬಿಡಿಸಿರಿ.
Work from home article

ವೀಕ್ಷಿಸಿದ ಅಂತರ್ಜಾಲದ ವಿವರ
Meghashala
Diksha app
Kannada nudi
Knowledge kannada
ದೂರವಾಣಿ ಮೂಲಕ ಸಂಪರ್ಕಿಸಿದ ವಿದ್ಯಾರ್ಥಿ /ಪೋಷಕರ ಹೆಸರು

ಮಕ್ಕಳ ಕಲಿಕೆಗೆ ಪೂರಕವಾದ ಆಡಿಯೋ ವಿವರ

ಘಟಕ ಯೋಜನೆ

ದೂರವಾಣಿ ಮೂಲಕ ಸಂಪರ್ಕಿಸಿದ ಸಹೋದ್ಯೋಗಿ ಹೆಸರು

ರಸಪ್ರಶ್ನೆ
1. ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳು ಎಷ್ಟು? ಉ:- 49
2.ಅಣ್ಣ ಈ ಪದದ ಬಹುವಚನ ರೂಪ ? ಉ:-ಅಣ್ಣಂದಿರು.
3. ಶುಕ ಈ ಪದದ ಅರ್ಥ ಏನು?ಉ:-ಗಿಳಿ
4.ಪರ್ವತ ಈ ಪದವು ಏನನ್ನು ಸೂಚಿಸುವುದು?ಉ:-ರೂಢನಾಮ
5. ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಸ್ವರಗಳು ಎಷ್ಟು? ಉ:- 13
6.ಉತ್ತಮ ಈ ಪದದ ವಿರುದ್ಧ ಪದ ಏನು? ಉ:-ಅಧಮ.
7. ಕರ್ನಾಟಕ ಸಂಗೀತದ ಪಿತಾಮಹ ಯಾರು?ಉ:- ಪುರಂದರದಾಸರು
8. ಅವರ್ಗೀಯ ವ್ಯಂಜನಗಳು ಎಷ್ಟು?ಉ:- 9
9. ಕಾರ್ಯ ಈ ಪದದ ತದ್ಭವ ರೂಪ? ಉ:- ಕಜ್ಜ.
10. ಸವಿಗನ್ನಡ ಇದು ಯಾವ ಸಂಧಿ ಉ:- ಆದೇಶ ಸಂಧಿ.