1. ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳು ಎಷ್ಟು? ಉ:- 49
2.ಅಣ್ಣ ಈ ಪದದ ಬಹುವಚನ ರೂಪ ? ಉ:-ಅಣ್ಣಂದಿರು.
3. ಶುಕ ಈ ಪದದ ಅರ್ಥ ಏನು?ಉ:-ಗಿಳಿ
4.ಪರ್ವತ ಈ ಪದವು ಏನನ್ನು ಸೂಚಿಸುವುದು?ಉ:-ರೂಢನಾಮ
5. ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಸ್ವರಗಳು ಎಷ್ಟು? ಉ:- 13
6.ಉತ್ತಮ ಈ ಪದದ ವಿರುದ್ಧ ಪದ ಏನು? ಉ:-ಅಧಮ.
7. ಕರ್ನಾಟಕ ಸಂಗೀತದ ಪಿತಾಮಹ ಯಾರು?ಉ:- ಪುರಂದರದಾಸರು
8. ಅವರ್ಗೀಯ ವ್ಯಂಜನಗಳು ಎಷ್ಟು?ಉ:- 9
9. ಕಾರ್ಯ ಈ ಪದದ ತದ್ಭವ ರೂಪ? ಉ:- ಕಜ್ಜ.
10. ಸವಿಗನ್ನಡ ಇದು ಯಾವ ಸಂಧಿ ಉ:- ಆದೇಶ ಸಂಧಿ.